|
ಶ್ರೀ ಕಣ್ವಮಠದ ಇತಿಹಾಸ
ಅದೊಂದು ಅಪೂರ್ವವಾದ ಸುವರ್ಣ ಸಂದರ್ಭ. ತಮ್ಮ ಮೂರನೆಯ ಅವತಾರದಲ್ಲಿ ಮಧ್ವಾಚಾರ್ಯರೆಂದು ಪ್ರಸಿದ್ಧಿ ಪಡೆದು ದ್ವೈತ ವೇದಾಂತ ಸಾಮ್ರಾಜ್ಯದ ಸಂಸ್ಥಾಪಕರಾಗಿ ಮೆರೆದವರು ಶ್ರೀವಾಯುದೇವರು. ಜಗತ್ತಿನಲ್ಲಿದ್ದ ಇಪ್ಪತ್ತೊಂದು ಮತಗಳನ್ನು ಖಂಡಿಸಿ, ಇಪ್ಪತ್ತೆರಡನೇ ಮತವಾದ ದ್ವೈತಮತವನ್ನು ಪ್ರಚುರಪಡಿಸಿದವರು ಶ್ರೀಮಧ್ವಾಚಾರ್ಯರು. ಇಂತಹ ಶ್ರೀಮಧ್ವಾಚಾರ್ಯರು ತಮ್ಮಲ್ಲಿ ಅಭ್ಯಾಸ ಮಾಡುತ್ತಿದ್ದ ಶಿಷ್ಯರನೇಕರಿಗೆ ಯತ್ಯಾಶ್ರಮವನ್ನು ಪ್ರದಾನ ಮಾಡಿ, ನಿರಂತರ ತತ್ವಜ್ಞಾನ ಪ್ರಸಾರಕ್ಕಾಗಿ ಅಣಿಗೋಳಿಸಿದರು.
ಅಂತಹ ಶಿಷ್ಯಕೋಟಿಯಲ್ಲಿ ಪ್ರಮುಖರಾದವರು ಶ್ರೀಪದ್ಮನಾಭತೀರ್ಥರು ಹಾಗೂ ಉಡುಪಿಯ ಅಷ್ಟಮಠದ ಯತಿವರೇಣ್ಯರು. ಈ ಅಷ್ಟಮಠದಲ್ಲಿ ಸೇರಿದ ಶ್ರೀಶಿರೂರುಮಠದ ಮೂಲ ಯತಿಗಳು ಶ್ರೀಮಧ್ವಾಚಾರ್ಯರ ಕರಕಮಲ ಸಂಜಾತರಾದ ಶ್ರೀವಾಮನತೀರ್ಥರು. ಇಂತಹ ವಾಮನತೀರ್ಥರ ಯತಿ ಪರಂಪರೆಯಲ್ಲಿ ಬಂದ ಶ್ರೀ ಲಕ್ಷ್ಮೀಮನೋಹರತೀರ್ಥ ಶ್ರೀಪಾದರಿಂದ ಸಂನ್ಯಾಸವನ್ನು ಸ್ವೀಕರಿಸಿ ಶ್ರೀಮಾಧವತೀರ್ಥರಿಂದ ಬೆಳೆದು ಬಂದ ಮಠವೇ "ಶ್ರೀಕಣ್ವಮಠ".
|
 |
|
ಶ್ರೀವಿದ್ಯಾಭಾಸ್ಕರತೀರ್ಥರು |
| |
 |
|
|
|