ಶ್ರೀ ಮನ್ಮಾಧವತೀರ್ಥರು ಮೂವರು ಮಹನೀಯರಿಗೆ ಸಂನ್ಯಾಸ ದೀಕ್ಷೆಯನ್ನು ಕೊಟ್ಟಿದ್ದಾರೆಂಬುದು ತಿಳಿದುಬರುತ್ತದೆ. ಆ ಮೂವರಲ್ಲಿ ಶ್ರೀ ವಿಷ್ಣುಪ್ರಿಯತೀರ್ಥರು ಎರಡನೇಯವರು. ಇವರು ಸುರಪುರ ಪಟ್ಟಣದವರು. ಭಾರದ್ವಾಜ ಗೋತ್ರೋತ್ಪನ್ನರು. ಇವರ ಪೂರ್ವಾಶ್ರಮದ ಹೆಸರು ವೇ||ಮೂ. ಶ್ರೀನಿವಾಸಾಚಾರ್ಯ ಕನಕಗಿರಿ ಎಂದು.ಇವರೂ ಕೂಡ ಮೋಕ್ಷಾರ್ಥಿಯಾಗಿ ಸಂನ್ಯಾಸ ಸ್ವೀಕಾರ ಮಾಡಿದರು.ಇವರ ಬೃಂದಾವನವು ಸುರಪುರಕ್ಕೆ ೬ ಮೈಲು ದೂರದಲ್ಲಿ ಕೃಷ್ಣಾ ನದಿ ತೀರದಲ್ಲಿರುವ ಸೂಗೂರ ಎಂಬ ಗ್ರಾಮದಲ್ಲಿ ಇರುವುದು. ಇವರ ಆರಾಧನೆಯು ಕಾರ್ತೀಕ ಶುದ್ಧ ಪ್ರತಿಪದ ದಿನ, ಅತೀ ವಿಜೃಂಭಣೆಯಿಂದ ಜರುಗುವುದು.